Calender of Events

"Vijnana Bhavana", No. 24/2 & 24/3, 21 Main Road, Banashankari II Stage,
Bengaluru - 560070, Karnataka State, INDIA

Telephone : +91 080
26718939, Telefax: +91 080 26718959,
E-mail : krvp.info@gmail.com

Current Events

Objectives

Constitution

Founders

Office bearers

Membership

Structure

Network

Activities

Publications

Science Centers

Science Films

Achievements

Contact us

 

 

 

An Autonomous organisation to popularise Science and Technology in Karnataka
 
 

ಯುವ ವಿಜ್ಞಾನಿ ಪ್ರಶಸ್ತಿ 2015-16 ರ ಅರ್ಜಿ ಸ್ವೀಕರಿಸುವ ದಿನಾಂಕವನ್ನು 23-12-2015 ರವರೆಗೆ  ಹಾಗೂ ಜಿಲ್ಲಾ ಮಟ್ಟದ ಸ್ಪರ್ಧೆಯನ್ನು  ದಿನಾಂಕ 9-1-2016 ಕ್ಕೆ ಮುಂದೂಡಲಾಗಿದೆ.

 

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು 2015-2016ನೇ ಸಾಲಿನ ಯುವವಿಜ್ಞಾನಿಗಳ ಪ್ರಶಸ್ತಿಗಾಗಿ 9 ರಿಂದ 12ನೇ ವರ್ಗದಲ್ಲಿ ಓದುತ್ತಿರುವ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಾಯೋಜಕತ್ವದಲ್ಲಿ ಸ್ಥಾಪಿಸಲಾಗಿದ್ದು, ವೈಜ್ಞಾನಿಕ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಗುರಿ ಹೊಂದಿದೆ.

ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ತೋರಿದ ವಿದ್ಯಾರ್ಥಿಗಳನ್ನು ಆಯ್ದು ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನಗಳನ್ನು ನೀಡಿ ಗೌರವಿಸಲಾಗುತ್ತದೆ.

ಆಸಕ್ತ ವಿದ್ಯಾರ್ಥಿಗಳು ನಿಗದಿತ ಅರ್ಜಿ ನಮೂನೆಯಲ್ಲಿ ವಿವರಗಳನ್ನು ಭರ್ತಿಗೊಳಿಸಿ ತಮ್ಮ ಮುಖ್ಯೋಪಾಧ್ಯಾಯರು/ಪ್ರಾಂಶುಪಾಲರ ಮೂಲಕ ಸಲ್ಲಿಸಬಹುದು. ಮೊದಲು ಜಿಲ್ಲಾ ಹಂತದಲ್ಲಿ ಮೂರು ಯುವ ವಿಜ್ಞಾನಿಗಳನ್ನು ಗುರುತಿಸಿದ ನಂತರ ರಾಜ್ಯ ಮಟ್ಟದಲ್ಲಿ ಎಲ್ಲಾ ಜಿಲ್ಲೆಗಳಿಂದ ಆಯ್ಕೆಯಾದ ಅತ್ಯುತ್ತಮ ಸುಮಾರು 100 ಯುವ ವಿಜ್ಞಾನಿಗಳು ಭಾಗವಹಿಸುವರು. ರಾಜ್ಯ ಮಟ್ಟದ ಕಾರ್ಯಕ್ರಮವು ಸಮಾವೇಶದ ರೂಪದಲ್ಲಿ 3 ದಿನಗಳ ಕಾಲ ಜರುಗುವುದು. ಸಮಾವೇಶದಲ್ಲಿ ವಿದ್ಯಾರ್ಥಿಗಳು ಖ್ಯಾತ ವಿಜ್ಞಾನಿಗಳೊಂದಿಗೆ ನೇರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ವೈಜ್ಞಾನಿಕ ವಿಧಾನದ ಪರಿಚಯ ಪಡೆಯುತ್ತಾರೆ.

ವಿದ್ಯಾರ್ಥಿಗಳನ್ನು ಭವಿಷ್ಯದಲ್ಲಿ ವಿಜ್ಞಾನಿಗಳನ್ನಾಗಿ ರೂಪಿಸುವ ಮತ್ತು ವಿಜ್ಞಾನ ವಿಷಯಗಳಲ್ಲಿ ಆಸಕ್ತಿ ಹಾಗೂ ಚಿಂತನ ಕೌಶಲ್ಯವನ್ನು ವೃದ್ಧಿಸುವ ಕಾರ್ಯಕ್ರಮ ಇದಾಗಿರುತ್ತದೆ.

ನಿಗದಿತ ಅರ್ಜಿ ನಮೂನೆಯನ್ನು ಆಯಾ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ / ಪದವಿಪೂರ್ವ ಶಿಕ್ಷಣ ಇಲಾಖೆ/ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ/ ಕರಾವಿಪ ಕಾರ್ಯಕಾರಿ ಸಮಿತಿ ಸದಸ್ಯರು/ ಜಿಲ್ಲಾ ಸಮಿತಿ/ ಜಿಲ್ಲಾ ಸಂಯೋಜಕರು ಇವರಿಂದ ಪಡೆಯಬಹುದು. ಕರಾವಿಪ ವೆಬ್ ಸೈಟ್ www.krvp.org ನಿಂದಲೂ ಅರ್ಜಿ ನಮೂನೆಯನ್ನು ಡೌನ್ ಲೋ ಡ್ ಮಾಡಿಕೊಳ್ಳಬಹುದು.

ಯುವವಿಜ್ಞಾನಿಗಳ ಪ್ರಶಸ್ತಿ ಬ್ರೋಷರ್ ಗೆ  ಈ  ಲಿಂಕ್ ಮೇಲೆ ಕ್ಲಿಕ್ ಮಾಡುವುದು.

ಅರ್ಜಿ ನಮೂನೆಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡುವುದು.

 

* ~ * ~ *

   
 

Home
 
   
  Copyright: Karnataka Rajya Vijnana Parishat
  This page was updated on : Tuesday, 15 December 2015 02:58:58 PM